ಗೃಹಲಕ್ಷ್ಮಿ ಯೋಜನೆಯ ಅರ್ಜಿ ಮರುಪರಿಶೀಲನೆಗೆ ತರಬೇತಿ
ಮೈಸೂರು, ಸೆ. 21(ಕರ್ನಾಟಕ ವಾರ್ತೆ ):- ಮಹಿಳಾ ಸಬಲೀಕರಣಕ್ಕಾಗಿ ಸರ್ಕಾರ ರೂಪಿಸಿರುವ ಗೃಹಲಕ್ಷ್ಮಿ ಯೋಜನೆಯ ಅರ್ಜಿ ಮರುಪರಿಶೀಲನಾ ತರಬೇತಿ ಕಾರ್ಯಗಾರ ಕಾರ್ಯಕ್ರಮವನ್ನು ತಿ. ನರಸೀಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.
ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಗ್ಯಾರಂಟಿ ಯೋಜನೆಯ ಉಪಾಧ್ಯಕ್ಷ ಹುಣಸೂರು ಬಸವಣ್ಣ ಅವರು ಮಾತನಾಡಿ ಗೃಹ ಲಕ್ಷಿ ಯೋಜನೆಯು ಸರ್ಕಾರದ ಮಹತ್ವಾಕಾಂಶಿ ಯೋಜನೆಯಾಗಿದ್ದು, ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗಬಾರದು ಎಂದರು.

ತರಬೇತಿಯನ್ನು 3 ಸೆಷನ್‌ಗಳ ಮೂಲಕ ಸುಮಾರು 340 ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗಿದ್ದು., ತರಬೇತಿ ಪಡೆದ ನಂತರ ಸರ್ಕಾರದ ಮಾರ್ಗಸೂಚಿಯಂತೆ ಪಡಿತರ ಚೀಟಿ ಹೊಂದಿರುವ ಮಹಿಳೆಯರ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ ಎಂದರು.
ಸಮಾಜದಲ್ಲಿ ಆಹಾಯಕರು ನಿರ್ಗತಿಕರಿಗೆ ಪಂಚ ಗ್ಯಾರಂಟಿಗಳ ಆಶಾಧಾಯಕವಾಗಿದ್ದು, ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ಅರ್ಜಿ ಸಲ್ಲಿಸುವಂತೆ ಕ್ರಮ ವಹಿಸಲು ತಿಳಿಸಿದರು. ತಾಲ್ಲೂಕು ಗ್ಯಾರಂಟಿ ಅಧ್ಯಕ್ಷರು ಶ್ರೀ ನವೀನ ರವರು ಗೃಹಲಕ್ಷ್ಮಿ ಯೋಜನೆಯಲ್ಲಿ ಬಂದಂತ ಹಣದಿಂದ ಹಲವು ಕುಟುಂಬಗಳು ನಿರ್ವಹಣೆ ಆಗಿರುತ್ತದೆ. ಅವರ ಜೀವನಕ್ಕೆ ಅಧಾರವಾಗಿರುತ್ತದೆ. ಎಂದು ತಿಳಿಸಿರುತ್ತಾರೆ.

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾದ ಎಸ್. ಮೇಗಡಹಳ್ಳಿ ಗ್ರಾಮದ ಮಹದೇವಮ್ಮ ರವರು ಗೃಹಲಕ್ಷ್ಮಿ ಯೋಜನೆಯ ಹಣದಿಂದ 4 ಮೇಕೆಗಳನ್ನು ಖರೀದಿಸಿ ತಮ್ಮ ಜೀನಮೋಪಾಯಕ್ಕೆ ದಾರಿ ಮಾಡಿಕೊಂಡಿರುತ್ತಾರೆ. ಆರ್ ಪಿ ಹುಂಡಿ ಗ್ರಾಮ ಸಾವಿತ್ರಿ ರವರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ಟೈಲರಿಂಗ್ ಮಿಷನ್ ಖರೀದಿಸಿ ತಮ್ಮ ಕುಟುಂಬದ ಹೇಳಿಗೆಗೆ ದಾರಿ ಮಾಡಿಕೊಂಡಿರುತ್ತಾರೆ ಕಲಿಯೂರು ಗ್ರಾಮದ ಶ್ರೀಮತಿ ಕವಿತ ರವರು ಗೃಹಲಕ್ಷ್ಮಿ ಯೋಜನೆಯ ಹಣದಿಂದ ಹಸುವನ್ನು ಖರೀದಿಸಿಕೊಂಡು ತಮ್ಮ ಜೀವನಕ್ಕೆ ದಾರಿ ಮಾಡಿಕೊಂಡಿದ್ದಾರೆ. ಗೃಹಲಕ್ಷ್ಮಿ ಯೋಜನೆಯ ಅಗತ್ಯತೆಯನ್ನು ಅರ್ಥಮಾಡಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ರಂಗಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೋವಿಂದರಾಜು, ಸಂರಕ್ಷಣಾಧಿಕಾರಿ ಶಾರದದೇವಿ , ಮಹಿಳಾ ಮೇಲ್ವಿಚಾರಕರಾದ ಸುಗಾಂಧ ಭೀಮವ್ವ ದಂಡಿನ, ಗಿರೀಶ್, ಅಂಗನವಾಡಿ ಕಾರ್ಯಕರ್ತೆಯರ ತರಬೇತಿಯಲ್ಲಿ ಹಾಜರಿದ್ದರು.