ಕರಾಟೆಯಲ್ಲಿ ಕೊಳ್ಳೇಗಾಲ ಸಹನಾ ಆಂಗ್ಲ ಮಾಧ್ಯಮ ಶಾಲೆ ಮಕ್ಕಳ ಸಾಧನೆ
ಕೊಳ್ಳೇಗಾಲ: – 2026 27ನೇ ಶೈಕ್ಷಣಿಕ ಸಾಲಿನ ಶಾಲಾ ಶಿಕ್ಷಣ ಇಲಾಖೆ ಚಾಮರಾಜನಗರ ದೈಹಿಕ ಶಿಕ್ಷಣ ವಿಭಾಗ ವತಿಯಿಂದ ನಡೆದ ಜಿಲ್ಲಾಮಟ್ಟದ ಸ್ಕೂಲ್ ಗೇಮ್ ಮತ್ತು ಸ್ಪೋರ್ಟ್ಸ್ ಚಾಂಪಿಯನ್ಶಿಪ್ ಪಂದ್ಯಾವಳಿಯಲ್ಲಿ ಕೊಳ್ಳೇಗಾಲದ ಸಹನ ಆಂಗ್ಲ ಮಾಧ್ಯಮ ಶಾಲೆಯಿಂದ ಭಾಗವಹಿಸಿದ್ದ ಎಲ್ಲಾ ಎಂಟು ವಿದ್ಯಾರ್ಥಿಗಳು ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.

- ತೇಜಸ್. S(10ನೇ ತರಗತಿ ).
- ನಂದಕುಮಾರ್ {10ನೇ ತರಗತಿ )
- ನವಾಜ್ ಪಾಷಾ {ಹತ್ತನೇ ತರಗತಿ }
- ಶಮಿಕ (9ನೇ ತರಗತಿ)
- ಸಿಂಚನ{ 9ನೇ ತರಗತಿ
- ದೀಪಾಂಜಲಿ{ 8ನೇ ತರಗತಿ}
- ನವ್ಯಶ್ರೀ {7ನೇ ತರಗತಿ }
- ಕರಣ್ (6ನೇ ತರಗತಿ)
ಈ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ. ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಯುತ ನಂಜುಂಡಸ್ವಾಮಿಯವರು ಹಾಗೂ ಮುಖ್ಯ ಶಿಕ್ಷಕರು ಕರಾಟೆ ಶಿಕ್ಷಕರು ಹಾಗೂ ಶಾಲೆಯ ಬೋಧಕ ಹಾಗೂ ಬೋಧಕೇತರ ವೃಂದದವರು ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ಅಭಿನಂದನೆ ಸಲ್ಲಿಸಿರುತ್ತಾರೆ.