ಚಾಮುಂಡಿ ತಾಯಿ ದರ್ಶನ ಪಡೆದ ಸೂಪರ್‌ಸ್ಟಾರ್ ರಜನಿಕಾಂತ್

ಮೈಸೂರು : ಚಾಮುಂಡಿ ತಾಯಿ ದರ್ಶನ ಪಡೆದ ಸೂಪರ್‌ಸ್ಟಾರ್ ರಜನಿಕಾಂತ್.!

ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನವನ್ನು ಸೂಪರ್‌ಸ್ಟಾರ್ ರಜನಿಕಾಂತ್ ಪಡೆದರು.

ಬೆಳ್ಳಂಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ರಜನಿಕಾಂತ್, ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ತಾಯಿಯ ದರ್ಶನ ಪಡೆದರು. ದರ್ಶನದ ಬಳಿಕ ಹೊರಬಂದ ಅವರು, ನೆರೆದಿದ್ದ ಅಭಿಮಾನಿಗಳತ್ತ ಕೈ ಬೀಸಿ ಅಲ್ಲಿಂದ ತೆರಳಿದರು.

ಟಿ. ನರಸೀಪುರದಲ್ಲಿ ನಡೆಯುತ್ತಿರುವ ಚಿತ್ರೀಕರಣದ ನಿಮಿತ್ತ ರಜನಿಕಾಂತ್ ಮೈಸೂರಿಗೆ ಆಗಮಿಸಿದ್ದಾರೆ. ಅವರೊಂದಿಗೆ ನಟಿ ಶ್ರೀಲೀಲಾ ಸೇರಿದಂತೆ ಚಿತ್ರತಂಡದ ಹಲವು ತಾರೆಯರು ಮೈಸೂರಿನಲ್ಲಿದ್ದಾರೆ.
ಸದ್ಯ ಚಾಮುಂಡಿಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದು ರಜನಿಕಾಂತ್ ತೆರಳಿದ್ದಾರೆ.

About Author

Leave a Reply

Your email address will not be published. Required fields are marked *