‘ಟಾಕ್ಸಿಕ್’ ಚಿತ್ರಕ್ಕಾಗಿ ʻರಾಕಿಂಗ್ ಸ್ಟಾರ್ʼಸ ಯಶ್ ಭರ್ಜರಿ ಬಾಡಿ ಟ್ರಾನ್ಸ್‌ಫಾರ್ಮೇಷನ್

ಸಿನಿಮಾ: ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಹಿಂದೆಂದೂ ಕಾಣದ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಭರ್ಜರಿಯಾಗಿ ದೇಹವನ್ನು ಹುರಿಗೊಳಿಸಿಕೊಂಡಿದ್ದರು.

ಯಶ್ ಅವರ ಈ ಸಾಲಿಡ್ ಹಾಗೂ ಕಟ್ಟುಮಸ್ತಾದ ಫಿಟ್‌ನೆಸ್ ಟ್ರಾನ್ಸ್‌ಫಾರ್ಮೇಷನ್ ಹಿಂದೆ ಖ್ಯಾತ ಫಿಟ್‌ನೆಸ್ ಗುರು, ಬಾಡಿಬಿಲ್ಡರ್ ‘ಪಾನಿಪುರಿ ಕಿಟ್ಟಿ’ ಅವರ ಕಠಿಣ ಪರಿಶ್ರಮ ಮತ್ತು ನಿರಂತರ ಮಾರ್ಗದರ್ಶನವಿದೆ.

ಹಲವು ವರ್ಷಗಳಿಂದ ಯಶ್ ಅವರ ಆಪ್ತ ಪರ್ಸನಲ್ ಟ್ರೇನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಪಾನಿಪುರಿ ಕಿಟ್ಟಿ, ರಾಕಿ ಭಾಯ್ ಅವರ ಬಾಡಿಬಿಲ್ಡಿಂಗ್ ಜರ್ನಿಯಲ್ಲಿ ನೆರಳಿನಂತೆ ಜೊತೆಯಾಗಿದ್ದಾರೆ.

‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಅವರ ಪಾತ್ರಕ್ಕೆ ತಕ್ಕಂತೆ ಅತ್ಯಂತ ಭಿನ್ನ ಹಾಗೂ ರಗಡ್ ಆದ ಲುಕ್ ಕಟ್ಟಿಕೊಡುವಲ್ಲಿ ಕಿಟ್ಟಿ ಅವರ ಕಸ್ಟಮೈಸ್ಡ್ ವರ್ಕೌಟ್ ಪ್ಲಾನ್ ಮತ್ತು ಡಯಟ್ ಪ್ರಮುಖ ಪಾತ್ರ ವಹಿಸಿದೆ.

ಜಿಮ್‌ನಲ್ಲಿ ತಾಸುಗಟ್ಟಲೆ ಬೆವರು ಹರಿಸುವಾಗ ಯಶ್ ಜೊತೆಯಲ್ಲೇ ಇದ್ದು ಪ್ರೇರೇಪಿಸಿರುವ ಕಿಟ್ಟಿ, ರಾಕಿಂಗ್ ಸ್ಟಾರ್ ಅವರ ಈ ಅದ್ಭುತ ಫಿಸಿಕಲ್ ಬದಲಾವಣೆಯ ಅಸಲಿ ಶಕ್ತಿಯಾಗಿ ನಿಂತಿದ್ದಾರೆ.

About Author

Leave a Reply

Your email address will not be published. Required fields are marked *