2027ಕ್ಕೆ ಗೌಡಗೆರೆ ಚಾಮುಂಡೇಶ್ವರಿ ಮಹಾಸಂಸ್ಥಾನದಲ್ಲಿ ಮಹಾಮಸ್ತಕಾಭಿಷೇಕಾ.!
ಚನ್ನಪಟ್ಟಣ : ಬೆಂಗಳೂರು ದಕ್ಷಿಣ ಜಿಲ್ಲೆ :-
ವಿಶ್ವದಲ್ಲೇ ಮೊಟ್ಟ ಮೊದಲ ಬಾರಿಗೆ 9 ದಿನಗಳ ಮಹಾಮಸ್ತಾಭಿಷೇಕ ಕಾರ್ಯಕ್ರಮಕ್ಕೆ ಚನ್ನಪಟ್ಟಣದ ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರ ಸಿದ್ದತೆ ಮಾಡಿಕೊಳ್ಳುತ್ತಿದೆ.
ಒಂದು ವರ್ಷಕ್ಕು ಮುನ್ನವೇ ಕ್ಷೇತ್ರದಲ್ಲಿ ಈಗಾಗಲೇ ಸಿದ್ದತಾ ಕಾರ್ಯ ಭರದಿಂದ ಸಾಗುತ್ತಿದ್ದು ಸನಾತನ ಧರ್ಮದ ಪರಂಪರೆಯ ಮುಂದುವರೆಯುವಿಕೆಯ ಕಾರ್ಯಕ್ರಮ ಇದಾಗಿದೆ.

ಈಗಾಗಲೇ 2022ರಲ್ಲೇ ಮೊಟ್ಟ ಮೊದಲ ಬಾರಿಗೆ ಮಹಾಮಸ್ತಕಾಭಿಷೇಕಾ ಯಶಸ್ವಿಯಾಗಿದ್ದು ಇದೀಗಾ 5 ವರ್ಷದ ಬಳಿಕ ಅಂದರೆ 2027ಕ್ಕೆ ಮಹಾಮಸ್ತಕಾಭಿಷೇಕಾ ನಡೆಸಲು ಸಿದ್ದತೆ ನಡೆಯುತ್ತಿದೆ.
*9ದಿನಗಳ ಕಾಲ 37 ದ್ರವ್ಯಗಳಿಂದ ಮಹಾಮಸ್ತಕಾಭಿಷೇಕಾ*
ಹೌದು ವಿಶೇಷ ಅಂದ್ರೆ ಈ ಬಾರಿ 9 ದಿನಗಳ ಕಾಲ ಮೊಟ್ಟ ಮೊದಲ ಬಾರಿಗೆ ಇಡೀ ವಿಶ್ವದಲ್ಲೇ ಚಾಮುಂಡೇಶ್ವರಿ ತಾಯಿಗೆ ಈ ಮಹಾಮಸ್ತಕಾಭಿಷೇಕಾ ನಡೆಯುತ್ತಿದ್ದು ಇದಕ್ಕಾಗಿ ದೊಡ್ಡ ಮಟ್ಟದ ಸಿದ್ದತೆ ಆಗುತ್ತಿದೆ.

ಈಗಿನಿಂದಲೇ ಸಿದ್ದತಾ ಕಾರ್ಯ ನಡೆಯುತ್ತಿದ್ದು ಭಾರತಾದ್ಯಂತ ಗಣ್ಯಾತಿಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಅದರಲ್ಲು ಸಿನಿಮಾ ತಾರೆಯರು, ರಾಜಕಾರಣಿಗಳು, ಜನಸಾಮಾನ್ಯರು, ಭಕ್ತ ಮಹಾಶಯರು ಸೇರಿ ಲಕ್ಷ ಲಕ್ಷ ಜನರು ಸೇರುವ ನಿರೀಕ್ಷೆ ಇದೆ.
ಭಕ್ತರು ಏನು ಮಾಡಬಹುದು.?
ಭಕ್ತರು ಈ ಮಹಾಮಸ್ತಕಾಭಿಷೇಕಾದಲ್ಲಿ ಭಾಗಿಯಾಗಲು, ನಿಮ್ಮ ಮನೆಯಿಂದಲೇ ಬೇಕಾದ ಪೂಜೆಯ ಸಾಮಾಗ್ರಿಗಳಾದ 37 ದ್ರವ್ಯಗಳಲ್ಲಿ ಯಾವುದು ಬೇಕಾದರು ತಂದು ಕೊಡಬಹುದು.
ಉದಾಹರಣೆಗೆ – ಅರಿಶಿಣ, ಕುಂಕು
ಮ, ಗಂಧ, ಬಸ್ಮ, ಜೇನು ತುಪ್ಪ, ಕಲ್ಲು ಸಕ್ಕರೆ, ಕೇಸರಿ, ಗಿಡಮೂಲಿಕೆ ಹೀಗೆ 37 ದ್ರವ್ಯಗಳನ್ನ ಭಕ್ತರು ಎಷ್ಟು ಬೇಕಾದರು ತಾಯಿಯ ಮಹಾಮಸ್ತಕಾಭಿಷೇಕಕ್ಕೆ ಕೊಡಬಹುದಾಗಿದೆ.
(ಹಾಲು ಮೊಸರು ಕೂಡ ಇದ್ದು, ಇದು ಮಹಾಮಸ್ತಕಾಭಿಷೇಕಾ ನಡೆಯುವ ಆಯ ದಿನವೇ ಭಕ್ತರು ಈಗಾಗಲೇ ಕೊಡಲು ನಿರ್ಧರಿಸಿದ್ದಾರೆ )
ಇನ್ನು ಗೌಡಗೆರೆ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಭೇಟಿ ಕೊಟ್ಟ ಬಳಿಕ ಅಲ್ಲಿಯೇ ಮಹಾಮಸ್ತಕಾಭಿಷೇಕದ ಪೂಜಾ ಸಾಮಗ್ರಿಗಳಿದ್ದು ಖುದ್ದು ಭಕ್ತರೇ ಕುಟುಂಬ ಸಮೇತ ಸಂಕಲ್ಪ ಮಾಡಿಸಿ ತಾಯಿಯ ಪಾದದ ಬಳಿ ಸಮರ್ಪಿಸಬಹುದಾಗಿದೆ.
2027ಕ್ಕೆ ಇಡೀ ಭಾರತವಲ್ಲ, ಇಡೀ ವಿಶ್ವವೇ ಒಂದು ಕ್ಷಣ ಗೌಡಗೆರೆ ಚಾಮುಂಡೇಶ್ವರಿ ಮಹಾಸಂಸ್ಥಾನದತ್ತ ತಿರುಗಿ ನೋಡುವಂತಾಗಲಿದ್ದು, ಭಕ್ತರು ಕೂಡ ತಾಯಿಯ ಮಹಾಮಸ್ತಕಾಭಿಷೇಕದಲ್ಲಿ ಭಾಗಿಯಾಗಿ ತಾಯಿಯ ಮಹಾಭಿಷೇಕದಲ್ಲಿ ನಿಮ್ಮ ಕೈಯಾರೆ ದ್ರವ್ಯಗಳನ್ನ ನೀಡಿ ಸನಾತನ ಧರ್ಮದ ಕಾರ್ಯಕ್ರಮದಲ್ಲಿ ಭಾಗಿಯಾಗಿ. ಅಲ್ಲದೆ ಮಹಾಮಸ್ತಕಾಭಿಷೇಕಾದ ವೈಭವದಲ್ಲಿ ಭಾಗಿಯಾಗಿ ಪೂರ್ವ ಜನ್ಮದ ಕರ್ಮದ ನಿವಾರಣೆಗೆ ಪ್ರಾರ್ಥಿಸಿ, ತಾಯಿ ಕೃಪೆಗೆ ಪಾತ್ರರಾಗಿ.