ಟ್ರೇಲರ್‌ ಮೂಲಕ ಮನೋರಂಜನೆ ಪ್ರಾಮಿಸ್‌ ಅಂತಿದ್ದಾರೆ ‘ಮದರ್ ಪ್ರಾಮಿಸ್’ ಟೀಂ

ಸಿನಿಮಾ: ಡಾಲಿ ಧನಂಜಯ ಅವರ ಡಾಲಿ ಪಿಕ್ಚರ್ಸ್ ನಿರ್ಮಾಣದ ‘ಮದರ್‌ ಪ್ರಾಮಿಸ್’ ಸಿನಿಮಾದ ಟ್ರೇಲರ್‌ ರಿಲೀಸ್ ಆಗಿದೆ. ಬ್ಯಾಕ್‌ ಟು ಬ್ಯಾಕ್‌ ಸಿನಿಮಾ ನಿರ್ಮಾಣ ಮಾಡುತ್ತಿರುವ ಡಾಲಿ ಧನಂಜಯ ಮದರ್‌ ಪ್ರಾಮಿಸ್‌ ಸಿನಿಮಾ ನಿರ್ಮಾಣ ಮಾಡುವುದರ ಜೊತೆಗೆ ಅಭಿನಯವನ್ನೂ ಮಾಡಿದ್ದಾರೆ…ಬಹುತೇಕ ಹೊಸಬರೇ ಇರುವ ಮದರ್‌ ಪ್ರಾಮಿಸ್‌ ಸಿನಿಮಾದ ಟ್ರೇಲರ್‌ ಕೂಡ ಪ್ರಾಮಿಸಿಂಗ್‌ ಆಗಿದೆ.

ತಮ್ಮದೇ ಸ್ನೇಹಿತರ ಬಳಗವೆಲ್ಲಾ ಸೇರಿಸಿಕೊಂಡು ಸಿನಿಮಾ ಮಾಡಿದ್ದು ಡಾಲಿ ಗೆಳೆಯ ಪೂರ್ಣ ಮೈಸೂರು ಈ ಸಿನಿಮಾವನ್ನು ನಿರ್ದೇಶನ ಮಾಡಿರುವುದು ವಿಶೇಷ. ಡಾಲಿ ಪಿಕ್ಚರ್ಸ್ ಸಹಯೋಗದೊಂದಿಗೆ ಡಾಲಿ ಗೆಳೆಯ ಹರ್ಷ ಈ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.

ಬ್ಯಾಕ್‌ ಟು ಬ್ಯಾಕ್‌ ಹಾಡುಗಳಿಂದಲೇ ಸದ್ದು ಮಾಡುತ್ತಿರುವ ಮದರ್‌ ಪ್ರಾಮಿಸ್‌ ಸಿನಿಮಾದ ಟ್ರೇಲರ್‌ ನಲ್ಲಿ ಸಿನಿಮಾದಲ್ಲಿ ಎಲ್ಲಾ ರೀತಿಯ ಎಮೋಷನ್‌ ಇರೋ ಸೂಚನೆ ಸಿಕ್ತಿದೆ..ಫ್ರೆಂಡ್‌ ಶಿಪ್‌, ಡಾನ್‌ ಗಳ ಗ್ಯಾಂಗ್‌ , ಕ್ರಿಕೆಟ್‌ ಬೆಟ್ಟಿಂಗ್‌, ಮದರ್‌ ಸೆಂಟಿಮೆಂಟ್‌ ಹೀಗೆ ಸಾಕಷ್ಟು ವಿಚಾರಗಳು ಟ್ರೇಲರ್‌ ನಲ್ಲಿ ಕಾಣುತ್ತೆ…ಮದರ್ ಪ್ರಾಮಿಸ್ ಕಂಕೆಟ್ ನೋಡಿ ಈಗಾಗಲೇ ಇಂಡಸ್ಟ್ರಿಯಲ್ಲಿ ಸಿನಿಮಾ ಬಗ್ಗೆ ಒಳ್ಳೆ ಟಾಕ್ ಶುರುವಾಗಿದೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡೋದ್ರ ಜೊತೆಗೆ ಸಿನಿಮಾ ಪ್ರೇಕ್ಷಕರ ಮನಸ್ಸು ಮುಟ್ಟೋದು ಪಕ್ಕಾ ಅಂತಿದ್ದಾರೆ ಗಾಂಧಿನಗರದ ಜನರು.

ಮದರ್ ಪ್ರಾಮಿಸ್’ ಕಾಮಿಡಿ ಹಾಗೂ ಥ್ರಿಲ್ಲಿಂಗ್ ಸಿನಿಮಾ. ಈ ಚಿತ್ರದಲ್ಲಿ ಡಾಲಿ ಧನಂಜಯ ಸೇರಿದಂತೆ ನಟ ನಾಗಭೂಷಣ್‌ , ಹಿರಿಯ ನಟಿ ವಿನಯಪ್ರಸಾದ್‌, ಗೀತಾ, ಗುರುದತ್‌ ಇನ್ನು ಅನೇಕರು ನಟಿಸಿದ್ದಾರೆ. ಈ ಸಿನಿಮಾ ಮೂಲಕ ಡಾಲಿ ಧನಂಜಯ ಅವರ ಸ್ನೇಹಿತ ಹರ್ಷ ಮುರುಂಡಿ ಶಿವಲಿಂಗಪ್ಪ ನಿರ್ಮಾಪಕರಾಗಿ ಸಿನಿಮಾರಂಗಕ್ಕೆ ಕಾಲಿಡುತ್ತಿದ್ದಾರೆ. ನಿರ್ದೇಶನದ ಜವಾಬ್ದಾರಿ ಪೂರ್ಣ ವಹಿಸಿಕೊಂಡಿದ್ದು ‘ಡೇರ್‌ ಡೆವಿಲ್‌ ಮುಸ್ತಾಫ’ ಸಿನಿಮಾ ನಿರ್ದೇಶಕ ಶಶಾಂಕ್‌ ಕ್ರಿಯೇಟಿವ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದಾರೆ. ರಾಹುಲ್‌ ರಾಯ್‌ ಕ್ಯಾಮೆರಾ, ನವನೀತ್‌ ಶ್ಯಾಮ್‌ ಸಂಗೀತಾ ನಿರ್ದೇಶನ ಈ ಸಿನಿಮಾಗಿದೆ…ಸದ್ಯ ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದ್ದು ಜುಲೈ ೧೦ ಕ್ಕೆ ಬಿಡುಗಡೆ ಆಗುತ್ತೆ..ತುಂಬಾ ದಿನಗಳ ನಂತರ ಯೂಥ್‌ ಫುಲ್‌ ಸಿನಿಮಾವೊಂದು ಬಿಡುಗಡೆ ಆಗುತ್ತಿದೆ

About Author

Leave a Reply

Your email address will not be published. Required fields are marked *