ಹೆಸರಿಗಷ್ಟೇ ಬೀದಿ ದೀಪ ಅಧಿಕಾರಿಗಳ ನಿರ್ಲಕ್ಷತನಕ್ಕೆ ಸಾರ್ವಜನಿಕರ ಹಿಡಿ ಶಾಪ

ಬೆಕ್ಕರೆ ಸತೀಶ್ ಆರಾಧ್ಯ

ಪಿರಿಯಾಪಟ್ಟಣ: ಪಿರಿಯಾಪಟ್ಟಣದ ಬೆಟ್ಟದಪುರ ವೃತ್ತದ ಬಳಿಯಿಂದ ಬೆಟ್ಟದಪುರ ಮಾರ್ಗವಾಗಿ ಹಾದು ಹೋಗುವ ರಸ್ತೆಯ ಎರಡು ಬದಿಯಲ್ಲಿ ಬೀದಿ ದೀಪದ ಎತ್ತರದ ಕಂಬಗಳಿದ್ದರೂ ರಾತ್ರಿ ಸಮಯ ವಿದ್ಯುತ್ ದೀಪಗಳು ಕರ್ತವ್ಯ ನಿರ್ವಹಿಸದ ಕಾರಣ ಪ್ರತಿನಿತ್ಯ ಆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಕತ್ತಲಲ್ಲಿಯೇ ಪ್ರಯಾಣಿಸಬೇಕಾದ ಅನಿವಾರ್ಯ ಸ್ಥಿತಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ನಿರ್ಲಕ್ಷತನದಿಂದಾಗಿ ಬಂದೋದಗಿದೆ.

ಅಭಿವೃದ್ಧಿ ಕೆಲಸಗಳು ರಾಜಕಾರಣಿಗಳು ಹಾಗೂ ಅಧಿಕಾರಿಗಳ ಬಾಯಿಮಾತಿಗಷ್ಟೇ ಸೀಮಿತ ಎಂಬುದಕ್ಕೆ ಪಿರಿಯಾಪಟ್ಟಣ ನಗರದ ಹೃದಯ ಭಾಗದ ರಸ್ತೆ ಸಂಜೆಯಾಯಿತೆಂದರೆ ಕತ್ತಲಲ್ಲಿ ಮುಳುಗುತ್ತಿರುವ ದೃಶ್ಯ ಅವರುಗಳ ಕರ್ತವ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ, ಕೇವಲ ಯಾವುದೋ ಗಲ್ಲಿ ಅಥವಾ ಸಣ್ಣಪುಟ್ಟ ರಸ್ತೆಯ ಬೀದಿ ದೀಪ ಬೆಳಗದಿದ್ದರೆ ಆಗುವ ಸಮಸ್ಯೆಗಳು ಹತ್ತು ಹಲವು ಆದರೆ ಪಿರಿಯಾಪಟ್ಟಣದಿಂದ ಬೆಟ್ಟದಪುರ ಮಾರ್ಗವಾಗಿ ಸಂಚರಿಸುವ ಸಂದರ್ಭ ರಸ್ತೆಯ ಇಕ್ಕೆಲಗಳಲ್ಲಿ ರಾಜ್ಯ ಹೆದ್ದಾರಿ ವತಿಯಿಂದ ನಿರ್ಮಿಸಿರುವ ಎತ್ತರದ ಬೀದಿ ದೀಪಗಳು ಕರ್ತವ್ಯ ನಿರ್ವಹಿಸದ ಕಾರಣ ಸ್ಥಳೀಯ ಅಂಗಡಿ ಹಾಗೂ ಸಣ್ಣಪುಟ್ಟ ವ್ಯಾಪಾರ ನಡೆಸುವ ಉದ್ದಿಮೆದಾರರಿಗೆ ಪ್ರತಿನಿತ್ಯ ತೊಂದರೆ ಆಗುತ್ತಿರುವ ದೃಶ್ಯ ಕಂಡು ಬರುತ್ತಿದೆ, ಕೂಡಲೇ ಸಮಸ್ಯೆ ಮನ ಗಂಡು ಸ್ಥಳೀಯ ಪುರಸಭೆಯಾಗಲಿ ಅಥವಾ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಾಗಲಿ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಮನಗಂಡು ಶೀಘ್ರ ಬಗೆಹರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಯಾವುದಾದರೂ ಅಪಘಾತ ಅಥವಾ ಅಪರಾಧ ಪ್ರಕರಣಗಳು ಆ ರಸ್ತೆಯಲ್ಲಿ ಕಂಡು ಬಂದರೆ ಅದಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆ.

ಸ್ಥಳೀಯ ನಿವಾಸಿಗಳಾದ ಪ್ರದೀಪ್, ಬೆಕ್ಕರೆ ಮಂಜುನಾಥ್, ಶಿವರಾಮೇಗೌಡ, ಪಿ.ಟಿ ಲಕ್ಷ್ಮಿ ನಾರಾಯಣ್ ಸೇರಿದಂತೆ ಹಲವು ಮುಖಂಡರು ಪಿರಿಯಾಪಟ್ಟಣ ನಗರ ಭಾಗದ ಹೆದ್ದಾರಿಯ ವಿದ್ಯುತ್ ದೀಪಗಳಲ್ಲಾಗುತ್ತಿರುವ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದು ಇದಕ್ಕೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಪಂದಿಸಿ ಸಮಸ್ಯೆ ಬಗೆಹರಿಸುತ್ತಾರೆ ಅಥವಾ ನಿರ್ಲಕ್ಷತನ ವಹಿಸಿ ಮುಂದಾಗುವ ಅನಾಹುತಗಳಿಗೆ ಕಾರಣರಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ???

About Author

Leave a Reply

Your email address will not be published. Required fields are marked *